
|
|

|
ಮುಕ್ತ ಮತ್ತು ದೂರ ಶಿಕ್ಷಣ
ಉನ್ನತ ಶಿಕ್ಷಣಕ್ಕೆ ಸೇರಿಕೊಂಡ ಅರ್ಧದಷ್ಟು ವಿದ್ಯಾರ್ಥಿಗಳು ದೂರ ಶಿಕ್ಷಣ ಅಂದರೆ ಮುಕ್ತ ವಿಶ್ವವಿದ್ಯಾನಿಲಯಗಳು ಅಥವಾ ಪಾರಂಪರಿಕ ವಿಶ್ವವಿದ್ಯಾನಿಲಯಗಳ ತೆರಪಿನ ಶಿಕ್ಷಣದ ಮೂಲಕ ಪಡೆಯುತ್ತಿದ್ದಾರೆ. ಆದರೆ ದೂರ ಶಿಕ್ಷಣದ ಗುಣಮಟ್ಟ(ಉನ್ನತ ಪದವಿಗಳಿಗೆ ಹಾಗೂ ಉದ್ಯೋಗಕ್ಕೆ ಈ ವಿದ್ಯಾರ್ಥಿಗಳನ್ನು ಒಪ್ಪಿಕೊಳ್ಳುವ)ದ ವಿಷಯವು ದೀರ್ಘ ಪ್ರಯತ್ನವಾಗಿದೆ. ಮುಕ್ತ ಶಿಕ್ಷಣ ವಿಷಯಗಳ ಬಗ್ಗೆಯೂ ಅನಿಯಮಿತ ಆಯ್ಕೆ ಇದೆ. ಬ್ರಾಡ್ ಬಾಂಡ್ ಮತ್ತು ಅಂತರ್ ಜಾಲ ಸೌಲಭ್ಯಗಳನ್ನು ಈ ಮುಕ್ತ ಶಿಕ್ಷಣ ವಿಷಯಗಳ ಅಭಿವೃದ್ಧಿಗೆ ಈ ದೇಶದಲ್ಲಿ ಮತ್ತಷ್ಟು ಅಭಿವೃದ್ಧಿಗೊಳಿಸಬೇಕಾಗಿದೆ. ಎಲ್ಲಾ ಸಂಸ್ಥೆಗಳಲ್ಲಿ ಬಳಸಲು ಇಂಥ ವಿಷಯದ ಸಂಗ್ರಹಣೆಯನ್ನು ರಾಷ್ಟ್ರಮಟ್ಟದ ಪರಿಣಿತರು ಅಭಿವೃದ್ಧಿಪಡಿಸಬೇಕಾಗಿದೆ.
ರಾಷ್ಟ್ರೀಯ ಜ್ಞಾನ ಆಯೋಗದ ಗಮನದಲ್ಲಿ ಇರುವ ಕೆಲವು ಅಂಶಗಳು:
- ದೂರ ಶಿಕ್ಷಣಕ್ಕೆ ಉತ್ತಮ ಗುಣಮಟ್ಟದ ತಾಂತ್ರಿಕತೆಯ ಬಳಕೆ
- ತಾತ್ವಿಕವಾಗಿ ತರಗತಿಗಳನ್ನು ಸ್ಥಾಪಿಸಲು ಬ್ರಾಡ್ ಬ್ಯಾಂಡ್ ಮತ್ತು ಅಂತರ್ ಜಾಲಗಳ ಸಂಪರ್ಕ
- ಮುಕ್ತ ಶಿಕ್ಷಣ ಪಠ್ಯ ಮತ್ತು ಸಂಪನ್ಮೂಲ ಭಂಡಾರವನ್ನು ದೇಶದಲ್ಲೆಲ್ಲಾ ಹಂಚುವುದು
- ಓ.ಸಿ.ಡಬ್ಲ್ಯೂ.ನ ಅಭಿವೃದ್ಧಿ, ಗುಣಮಟ್ಟಗಳ ಸ್ಥಾಪನೆಯಲ್ಲಿ ಕೈಗಾರಿಕೆಯನ್ನು ಬಳಸಿಕೊಳ್ಳಬೇಕು
| More Open and Distance Education links: |
ಪರ್ಯಾಲೋಚನೆ |
|
|
|