
|
|

|
ಆರೋಗ್ಯ ಮಾಹಿತಿ ಜಾಲ ಕುರಿತು ಸಮೀಕ್ಷೆ
ತನ್ನ ಕರಾರಿನ ಒಂದು ಭಾಗವಾಗಿ ಉತ್ತಮ ಆರೋಗ್ಯ ಮೇಲ್ವಿಚಾರಣೆಯ ಹಾದಿಯನ್ನು ಅಭಿವೃದ್ಧಿಗೊಳಿಸಲು ಎನ್ಕೆಸಿ ರಾಷ್ಟ್ರಮಟ್ಟದಲ್ಲಿ ಒಂದು ಜಾಲ ಆಧಾರಿತವಾದ ನಿರ್ಭೀತ ವಿದ್ಯುಚ್ಛಾಲಿತ ಆರೋಗ್ಯ ಮಾಹಿತಿ ಜಾಲ ಕೇಂದ್ರವನ್ನು ಸೃಷ್ಟಿಸಲು ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ. ಭಾರತದಲ್ಲಿ ಆರೋಗ್ಯ ಮೇಲ್ವಿಚಾರಣೆಯನ್ನು ಜನರಿಗೆ ಸಲ್ಲಿಸುವ ವಿಚಾರದಲ್ಲಿ ವಿಶ್ವಾಸನೀಯವಾದ, ವೇಗವಾದ, ನಿಜಾವಧಿಯ ಆರೋಗ್ಯ ವಿಷಯಗಳ ಸಂಗ್ರಹ ವ್ಯವಸ್ಥೆ ಅತ್ಯವಶ್ಯವಾಗಿದೆ, ಆರೋಗ್ಯ ಮೇಲ್ವಿಚಾರಣೆ ನೀಡುವ ಸಂಸ್ಥೆಗಳ ಸ್ವಂತ ಬೆಳವಣಿಗೆ ನಾನಾ ರೀತಿಯ ಆರೋಗ್ಯ ಮಾಹಿತಿ ಸಂಗ್ರಹ ಮತ್ತು ಪ್ರಸರಣದ ಮಾನದಂಡವನ್ನು ಸೃಷ್ಟಿಸಲು ಶಕ್ತವಾಗಿವೆ ಮತ್ತು ಇದರಲ್ಲಿ ಪರಸ್ಪರ ಚಲನಸಾಧ್ಯತೆಯ ಕೊರತೆಯ ಕಾರಣದಿಂದ ಆರೋಗ್ಯ ಮೇಲ್ವಿಚಾರಣೆಯ ವೆಚ್ಚ ಬಹಳ ಪ್ರಮಾಣದಲ್ಲಿ ಹೆಚ್ಚಾಗುವುದು. ಈ ಹಂತದಲ್ಲಿ ಕೆಲವು ಪ್ರಯೋಗಿಕ ಮತ್ತು ಮಾಹಿತಿ ತಂತ್ರಜ್ಞಾನದ ಮಾನದಂಡಗಳು ಲಭ್ಯವಿದೆ. ಆರೋಗ್ಯ ಹಂತ 7, ವೈದ್ಯಕೀಯ ಪ್ರಾಯೋಗಿಕ ಪದಗಳ ಕ್ರಮಬದ್ಧ ನಾಮಕರಣ ವ್ಯವಸ್ಥೆ, ವೈದ್ಯಕೀಯ ಕ್ಷೇತ್ರದಲ್ಲಿ ಅಂಕೀಯ ವರ್ಣನಾ ಸಂಪರ್ಕ ವಿಜ್ಞಾನಗಳು, ಇತರೆ ಆದುದರಿಂದ ಹತ್ತಿರದ ಭವಿಷ್ಯದಲ್ಲಿ ಹುಟ್ಟಬಹುದಾದ ತೊಂದರೆಗಳನ್ನು ಪೂರ್ವಾಭಾವಿಯಾಗಿ ತಿಳಿದುಕೊಳ್ಳಲು ಇಂತಹ ಆರೋಗ್ಯಜಾಲಗಳ ಅವಶ್ಯ ಬಹಳ ತುರ್ತಾಗಿದೆ.
ಮೊದಲನೆ ಹಂತವಾಗಿ ಎನ್ಕೆಸಿ ಯು ರಾಷ್ಟ್ರದಲ್ಲಿ ಪ್ರಮುಖವಾಗಿ ಆರೋಗ್ಯ ಮೇಲ್ವಿಚಾರಣೆ ಕೇಂದ್ರಗಳು ವರ್ತಮಾನದಲ್ಲಿ ಬಳಸುತ್ತಿರುವ ಅಥವಾ ಭವಿಷ್ಯದಲ್ಲಿ ಬಳಸಲಿಚ್ಛಿಸುವ ಪ್ರಯೋಗಿಕ ಮತ್ತು ಮಾಹಿತಿ ತಂತ್ರಜ್ಞಾನ ಮಾನದಂಡಗಳನ್ನು ಕುರಿತು ಮಾಹಿತಿಯನ್ನು ಸಂಗ್ರಹಿಸಲು ಕೈಗೆತ್ತಿಕೊಂಡಿದೆ. ಪ್ರಶ್ನಾವಳಿಯನ್ನು ರಾಷ್ಟ್ರದಲ್ಲಿರುವ ಎಲ್ಲಾ ಪ್ರಮುಖ ಆರೋಗ್ಯ ಲಕ್ಷ್ಯ ಒದಗಿಸುವವರಿಗೆ ಹಾಗೂ ವೈದ್ಯಕೀಯ ಕಾಲೇಜುಗಳಿಗೆ ಮತ್ತು ಸಂಶೋಧನಾ ಸಂಸ್ಥೆಗಳಿಗೆ ಬಹಳ ಉಪಯುಕ್ತವಾದ ಮೂರು ಅಂಶಗಳ ಮೇಲೆ ಮಾಹಿತಿಯನ್ನು ಶೇಖರಿಸಲು ವಿತರಿಸಲಾಗಿತ್ತು.:
- ಆರೋಗ್ಯ ಮಾಹಿತಿ ತಂತ್ರಾಂಶವನ್ನು ಹೊಂದಿರುವ ಸಂಸ್ಥೆಗಳ ಸಂಖ್ಯೆ ಮತ್ತು ವಿಧ
- ಪ್ರಾಯೋಗಿಕ ಹಾಗೂ ಮಾಹಿತಿ ತಂತ್ರಜ್ಞಾನದ ಅತಿಸಾಮಾನ್ಯವಾದ ಬಳಕೆ ಮತ್ತು ರಾಷ್ಟ್ರಮಟ್ಟದಲ್ಲಿ ಸಂಸ್ಥೆಗಳು ಬೆಂಬಲಿಸಲಿಚ್ಚಿಸುವ ಮಾನದಂಡಗಳು
- ನಿಖರವಾದ ಮಾನದಂಡಗಳಲ್ಲೂ ತೊಂದರೆಗಳು ಈಗ ಬಳಕೆಯಲ್ಲಿರುವವು
|
|
|